ನಾವಿಕ

ಬನ್ನಿರೆಲ್ಲ, ಬನ್ನಿರೆಲ್ಲ, ಕೈ ಜೋಡಿಸೋಣ

ಕಟ್ಟುವೆವು ನಾವು

ಕಟ್ಟುವೆವು ನಾವು ಹೊಸ ಸೈಬರ್ ನಾಡೊಂದನು
ಕಾನೂನು ಮನ್ನಿಸಿ ನಡೆವರ ಬೀಡೊಂದನು
ಬೇಕಿದಕೆ ಎಲ್ಲರಿಗೆ ಸೈಬರ್ ಕಾನೂನಿನ ಅರಿವು
ಮೂಡಿಸಲು ಟೊಂಕಕಟ್ಟಿ ನಿಂತಿರುವೆವು ನಾವು

ವಿಶ್ವವೆಲ್ಲ ಆಯಿತು ಅಂತರ್ಜಾಲ ಮಯ
ರಕ್ಷಿಸಲು ಬೇಕು ತಾಂತ್ರಿಕತೆಯ ಮಾಯ
ಇದ್ದರೆ ಜೊತೆಗೆ ಸೈಬರ್ ಕಾನೂನಿನ ಕವಚ
ಅರಳುವುದು ಆಗಲೇ ಸೈಬರ್ ಪ್ರಪಂಚ

ಬನ್ನಿರೆಲ್ಲ, ಬನ್ನಿರೆಲ್ಲ, ಕೈ ಜೋಡಿಸೋಣ
ಆಗಲಿ ಕರ್ನಾಟಕ ವಿಶ್ವಮನ್ನಣೆಯ ತಾಣ

ಎಂಬ ಕೂಗಿನೊಡನೆ ನಾನು ಕರ್ನಾಟಕ ಪ್ರಜ್ಞ್ನಾಂದೋಳನ ಕಾರ್ಯಕ್ರಮವನ್ನು ೨೦೦೫ ನೇ ವರ್ಷದಿಂದ ನಡೆಸಿಕೊಂಡು ಬರುತ್ತಿದ್ದೇನೆ. ಈ ದಿಸೆಯಲ್ಲಿ ನಾವಿಕ.ಇನ್ ಸೈಬರ್ ತಾಣ ಒಂದು ಅಂಗ. ಈ ಸೈಬರ್ ತಾಣದಲ್ಲಿ ಆಸಕ್ತಿಯಿರುವ ಕನ್ನಡಿಗರು ಸೈಬರ್ ಕಾನೂನಿನ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕೆಂದು ನಾನು ಬಯಸುತ್ತೇನೆ.

ಸೈಬಾರಾಂಬರೊದೊಳಗಿನ ಈ ಕನ್ನಡದ ತಾಣಕ್ಕೆ ಇಲ್ಲಿ ಪ್ರವೇಶಿಸಬಹುದು.(www.naavika.in)

ನಾವಿ

Print Friendly